ಕರುನಾಡ ತಾಯಿ ಭುವನೇಶ್ವರಿಯ, ಏಕೈಕ ಮಂದಿರ ಇರುವುದು ಭುವನಗಿರಿಯಲ್ಲಿ. ತಾಯಿ ಭುವನೇಶ್ವರಿಯೇ ನೆಲೆಸಿರುವುದಕ್ಕೋ ಏನೋ ಆ ಬೆಟ್ಟದೂರಿಗೆ ಆ ಹೆಸರು. ಅದು ನನ್ನ ದೊಡ್ಡಪ್ಪನ ಮನೆ. ಅಲ್ಲಿಂದ 6 ಕಿ.ಮೀ ಈಚೆ ಸಿದ್ದಾಪುರ, ಅದು ನನ್ನ ಹೆತ್ತೂರು. ಅತ್ತ ಮಲೆನಾಡು - ಇತ್ತ ಕರಾವಳಿ, ಇವೆರಡರ ಸಂಗಮದಲ್ಲಿ ಹಚ್ಚು ಹಸುರಾಗಿದ್ದ ಊರದು.
ತಾಯಿ ಭುವನೇಶ್ವರಿಯ ಪಾದದಡಿಯಲ್ಲಿ ಬೆಳೆದದ್ದಕ್ಕೋ ಏನೋ, ನಮ್ಮಲ್ಲಿ ಅರಳು ಹುರಿದಂತೆ ಶುದ್ಧ ಕನ್ನಡ ಮಾತಾಡುವುದು ರೂಢಿ. ಕನ್ನಡ ಚಲನಚಿತ್ರಕ್ಕೆ ಶಂಕರ ನಾಗರನ್ನು, ಪಂಢರೀ ಭಾಯಿಯವರನ್ನು, ರಾಜಕೀಯಕ್ಕೆ ಕರುನಾಡ ಹೆಮ್ಮೆಯ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಯವರನ್ನು, ಹಾಗು ಸಾಹಿತ್ಯಕ್ಕೆ ಚುಟುಕು ಬ್ರಹ್ಮ ದಿನಕರ ದೇಸಾಯಿಯವರನ್ನು ಕೊಟ್ಟ ಜಿಲ್ಲೆ ನನ್ನದು. ಆ ಪಕ್ಕದಲ್ಲಿ ಶಿವಮೊಗ್ಗ, ಈ ಪಕ್ಕದಲ್ಲಿ ಮಂಗಳೂರು, ಅಂದರೆ ಆ ಪಕ್ಕದಲ್ಲಿ ಪುಟ್ಟಪ್ಪ (ಕುವೆಂಪು) ಈ ಪಕ್ಕದಲ್ಲಿ ಗೋವಿಂದ ಪೈ ಅಂದಂಗಾಯ್ತು.
ನಮಗೋ ಕನ್ನಡದ ಮೇಲೆ ಅಪಾರ ಪ್ರೀತಿ. ಅಭಿಮಾನ? - ಆ ಪದ ಭಾಷೆಗೂ ಅನ್ವಯಿಸುತ್ತದೆ ಅಂತ ಗೊತ್ತೇ ಇರ್ಲಿಲ್ಲ. ಅಭಿಮಾನಕ್ಕೆ ಆಸ್ಪದ ಸಿಗುವುದು ಸ್ಪರ್ಧೆಯಿದ್ದಾಗಲಲ್ಲವೇ? ಬೇರೆ ಭಾಷೆಯ ವಾಸನೆಯೇ ಇರದ ನಾಡದು. ಅದನ್ನೇ ಪ್ರೀತಿಸಬೇಕು, ಅದನ್ನೇ ಬಳಸಬೇಕು. ಅಲ್ಲಿ ಕನ್ನಡ ಮಾತಾಡುವುದು ಉಸಿರಾಡಿದಷ್ಟೇ ಸರಳ, ಸಾಮಾನ್ಯ.
ಆಗಿನ್ನೂ ಬೆಂಗಳೂರು ಮಹಾನಗರಿಗೆ ನಾನು ಹೊಸಬ, ಬೆಂಗಳೂರಿನ ಕನ್ನಡ ಭಾಷಾ ಸೊಗಡು ಅಷ್ಟೊಂದು ಚಿರಪರಿಚಿತವಿರಲಿಲ್ಲ ನನಗೆ. ಯಾವುದೋ ಅಡ್ರೆಸ್ ಕೈಯಲ್ಲಿ ಹಿಡಿದು, ಅರಿಯದ ರಸ್ತೆಯಲ್ಲಿ ಪರದಾಡುತಿತ್ತದೆ. ಆಗ ಕಣ್ಣಿಗೆ ಬಿದ್ದನೊಬ್ಬ ಭೂಪ.
ನಾನು - "ಸಾರ್, ಈ ಅಡ್ರೆಸ್ಸ್ ಗೊತ್ತಿದೆಯೇ ನಿಮಗೆ? ಗೊತ್ತಿದ್ದರೆ ದಯವಿಟ್ಟು ದಾರಿ ತೋರಿಸಿ"
ಆಸಾಮಿ - "ಒಹ್! ಇದಾ, ಹೀಗೆ ಸ್ಟ್ರೈಟ್ ಹೋಗಿ, ರೈಟ್ ತಗೋಂಡ್ಬಿಟ್ಟು, ಫಸ್ಟ್ ಲೆಫ್ಟ್ ತಂಗೊಂಡ್ಬಿಟ್ಟು ಹಂಡ್ರೆಡ್ ಮೀಟರ್ ಮುಂದೆ ಹೋದ್ರೆ, ಅಲ್ಲೇ ಇದೆ ಈ ಬಿಲ್ಡಿಂಗ್" ಅಂದ.
ನನಗೋ ತಲೆ ಗಿರ್ ಅಂತು. ವಿಳಾಸ ತಿಳಿಯಿತು ನಿಜ, ಆದ್ರೆ ಈ ಭೂಪ ಅದೇನೋ, ರೈಟ್ ತಗೋಂಡ್ಬಿಟ್ಟು , ಲೆಫ್ಟ್ ತಗೋಂಡ್ಬಿಟ್ಟು ಅಂದ್ನಲ್ಲ, ಏನು ಬಿಡಬೇಕು ರೈಟ್ ಗೆ? ಏನು ಬಿಡಬೇಕು ಲೆಫ್ಟ್ ಗೆ? ಅಂತ ತಿಳೀಲೇ ಇಲ್ಲ. ಆದರೂ ನನ್ನ ಪುಣ್ಯವನ್ನ ನಾನೇ ಹಳಿದುಕೊಂಡಂದೆ " ಪುಣ್ಯ! ಎರಡೇ ಟರ್ನ್ ಇದೆ, ಮೂರೇನಾದ್ರೂ ಇದ್ದಿದ್ರೇ, ಮೂರು ಬಿಡ್ಬೇಕಾಗ್ತಿತ್ತು, ಸಧ್ಯ ಮರ್ಯಾದೆ ನಾದ್ರೂ ಉಳಿತಲ್ಲ" ಅಂತ. ಕೇಳಿಲ್ವೇ, ಮೂರು ಬಿಟ್ಟವರು ಊರಿಗೆ ದೊಡ್ಡವರು ಅಂತ!
ಇದು ಇಲ್ಲಿಯ ಭಾಷಾ ಸೊಗಡು. ಭಾಷೆಯ ಸಂಪತ್ತು, ಅದರ ಸೊಗಡೇ ಅಲ್ಲವೇ? ಕರುನಾಡಲ್ಲಿ ಪ್ರತಿ ೧೦ ಕಿ.ಮೀ ಗೆ ಭಾಷೆ ಬದಲಾಗುತ್ತದೆ. ಅಲ್ಲ - ಅಲ್ಲ, ಭಾಷೆ ಅದೇ, ಅದರ ಸೌಂದರ್ಯ ಬದಲಾಗುತ್ತದೆ ಅಷ್ಟೇ. ಇದು ಬೆಂಗಳೂರು ಕನ್ನಡ, ಮತ್ತದರ ಸೌಂದರ್ಯ!
ಆಗಿನ್ನೂ ಇಂಜಿನಿಯರಿಂಗ್ ನ ಪ್ರಥಮ ಸೆಮಿಸ್ಟರ್. ಬೆಂಗಳೂರು ಕೊಂಚ ಹಳೆತಾದರೂ, ಇಲ್ಲಿಯ ಕನ್ನಡಕ್ಕೆ ನಾನಿನ್ನು ಒಗ್ಗಿ ಕೊಂಡಿರಲಿಲ್ಲ. "ಒಂದು ಕಿಲೋ ಆಲೂ ಕೊಡಿ", "ಆ ಗೋಬಿ ಗೆಷ್ಟು ಬೆಲೆ?" ಎನ್ನುವ ಮಹಾ ಕನ್ನಡಾಭಿಮಾನಿಗಳಿರುವ ಬೆಂಗಳೂರಲ್ಲವೇ ಇದು? ಆಲೂ, ಗೋಬಿ - ಆಲೂಗಡ್ಡೆ (ಬಟಾಟೆ) ಮತ್ತು ಹೂಕೋಸನ್ನು ಎಂದಿಗೋ ನುಂಗಿ ಕೂತಿದೆ ಇಲ್ಲಿ. ಆಲೂ, ಗೋಬಿ ಈಗ ಇಲ್ಲಿ ಕನ್ನಡದ ಪದಗಳೇ!!
ಮೊದಲ ಇಂಟರ್ನಲ್ ಕಾಲೇಜಿನಲ್ಲಿ, ಎಲ್ಲರಿಗೂ ಹೆಚ್ಚು ಅಂಕ ಗಳಿಸಲೇ ಬೇಕೆಂಬ ಹಂಬಲ. 2nd ಪಿ.ಯು ನಂತರ 5 -6 ತಿಂಗಳಿಂದ ಪುಸ್ತಕದ ಗೋಜಿಗೇ ಹೋಗಿರಲಿಲ್ಲವಲ್ಲ ನಮ್ಮ ಪ್ರಿಯ ವಿದ್ಯಾರ್ಥಿಗಳು! ಆರು ತಿಂಗಳ ನಂತರ ಬಂದ ಪರೀಕ್ಷೆಯು ಅವರಿಗೆ ಪ್ರಿಯವಾಗಿ ಕಂಡುದರಲ್ಲಿ ಆಶ್ಚರ್ಯ ಪಡಬೇಕಾದದ್ದೇನಿಲ್ಲ. ಅವರಲ್ಲಿ ಅರ್ಧ ಜನ, ಇನ್ನೆಂದೂ ತಮ್ಮ ಸಂಪೂರ್ಣ ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿ ಅಷ್ಟು ಶ್ರದ್ಧೆಯಿಂದ ಓದಿಯೇ ಇಲ್ಲ ಎಂದರೆ ಅತಿಶಯೋಕಿಯೇನಿಲ್ಲ !!
ನಾನೂ ಇದೇ ಗುಂಪಿಗೇ ಸೇರಿದವ! ನಾನೂ ಮತ್ತು ನನ್ನ ನಾಲ್ಕೈದು ಸ್ನೇಹಿತರು, ಸಮರ ಕಾಲೇ ಶಸ್ತ್ರಾಭ್ಯಾಸಹ ಎಂಬಂತೆ ಕೊನೆ ಕ್ಷಣದ ತಯಾರಿಯಲ್ಲಿ ತೊಡಗಿದ್ದೆವು. ನನ್ನ ಕಾಲೇಜೋ, ಕಾಲೇಜು ಕಮ್ಮಿ, ಜಾತ್ರೆ ಎಂದೆನ್ನಬಹುದು. 121 ಎಕರೆಯಲ್ಲಿ ಎದೆಹರಡಿಕೊಂಡು ಮಲಗಿರುವ , ನೂರಾರು ವಿದ್ಯಾಸಂಸ್ಥೆಗಳ ಸಮೂಹ ಅದು.
ಕಾಲೇಜಿನ ಸಸ್ಯತೋಟದಲ್ಲಿ ಒಂದು ಒಂಟಿ ಮರ, ಅದರ ಬುಡದಲ್ಲೇ ನನ್ನ ಮತ್ತು ನನ್ನ ಸ್ನೇಹಿತರ ಬಿಡಾರ ಪರೀಕ್ಷಾ ಸಮಯದಲ್ಲಿ. ದಪ್ಪನೆ ಹಾಸಿದ ಹಸಿರು ಹುಲ್ಲಿನ ಪಲ್ಲಂಗ, ಯಥೇಚ್ಛವಾಗಿ ಸುರಿಯುತ್ತಿದ್ದ ಮರದ ದಪ್ಪನೆ ನೆರಳು, ಇನ್ನೇನು ಬೇಕು? ನಾವೆಲ್ಲರೂ, ಹಕ್ಕಿಯ ಕಣ್ಣಿಗೆ ಬಾಣ ಹೂಡಿದ ಅರ್ಜುನರೇ! ಓದುವ ಶಿಸ್ತಿನಲ್ಲಿ, ದ್ರೋಣಾಚಾರ್ಯರೊಂದಿರಲಿಲ್ಲ ಅಲ್ಲಿ ಅಷ್ಟೇ! ಪರೀಕ್ಷೆಗೆ ಮೊದಲು ಎಲ್ಲರು ಅರ್ಜುನರೇ, ಮುಗಿದ ಮೇಲೆ ಎಲ್ಲರು ಧುರ್ಯೋಧನರೇ! ಆ ಮರದ ಕೆಳಗೆ. ದ್ರೌಪದಿ ಸಿಗಲಿಲ್ಲ ಅವಳ ಪುಣ್ಯ!
ಘಂಟೆ ಶಬ್ದ ಕೇಳಿತು, ಎಲ್ಲರು ಸಮರಕ್ಕೆ ಸಜ್ಜಾದೆವು. ಇನ್ನೇನು ಹೋರಾಡಬೇಕು, ನನ್ನ ಬೆಂಗಳೂರಿನ ಕನ್ನಡಿಗ ಗೆಳೆಯನೊಬ್ಬ ಹಾವು ಬಾಲ ತುಳಿದವನಂತೆ ಬೆಚ್ಚಿ ಬಿದ್ದ, ಮತ್ತಂದ,
"ಲೇ, ಭಂಡಾರಿ! ನೋಡೋ ಅಲ್ಲಿ ಉಲ್ಲು"
ಬೆಂಗಳೂರಿನ ಆಲೂ, ಗೋಬಿ ಮಿಶ್ರಿತ ಕಲಬೆರಿಕೆ ಕನ್ನಡದ ಅರಿವಿದ್ದ ನನಗೆ ತಕ್ಷಣ ಅರ್ಥವಾಯಿತು ಅವನ ಮಾತು. ನನ್ನ ತಾಯಿ ಹೇಳಿದ್ದರು ಎಂದೋ, ಒಳ್ಳೆಯ ಕೆಲಸಕ್ಕೆ ಹೊರಟಾಗ ಗೂಬೆ ದರ್ಶನವಾದರೆ, ಫಲ ಖಂಡಿತ ಎಂದು!
ನನ್ನ ಓದಿನ ಮೇಲೆ ನನಗೆ ಎಳ್ಳಷ್ಟೂ ನಂಬಿಕೆ ಇರಲಿಲ್ಲ, ಗೂಬೆಯ ದಯೆಯಿಂದಾದರೂ ಪಾಸಿಂಗ್ ಮಾರ್ಕ್ಸ್ ಸಿಕ್ರೇ! ಅಂತ ತಕ್ಷಣ ತಲೆ ಎತ್ತಿ ನೋಡಿದೆ. ಎಲ್ಲ ಕೊಂಬೆ ಹುಡುಕಿದರೂ ಗೂಬೆ ಕಾಣಲೇ ಇಲ್ಲ.
ಅಷ್ಟರಲ್ಲೇ, ಮಹಾಕನ್ನಡಾಭಿಮಾನಿ ಮತ್ತೆ ಎದೆ ಒಡೆದುಕೊಂಡು ಕಿರುಚಿದ
"ಲೇ, ಅಲ್ಲಿ ನೋಡೋ ಎಷ್ಟು ದೊಡ್ಡ ಉಲ್ಲು"
ನನಗು ಕೋಪ ನೆತ್ತಿಗೇರಿತ್ತು, ಪಾಸಾಗೋಣ ಎಂದರೆ ಹಾಳು ಗೂಬೆಯು ಕಾಣುತ್ತಿಲ್ಲ ನನಗೆ, ಈ ಗೂಬೆಗೆ ಮಾತ್ರ ಚೆನ್ನಾಗಿ ಕಾಣುತ್ತಿದೆಯಲ್ಲ, ಬಹುಷಃ ಜಾತಿಯ ನಂಟಿರಬೇಕು ಎಂದುಕೊಂಡೆ, ಗದರಿದೆ
"ಎಲ್ಲೋ ಇದೆ? ಕಾಣ್ತಾನೆ ಇಲ್ವಲ್ಲೋ, ಕೈಯೆತ್ತಿ ತೋರಿಸಬಾರ್ದಾ?"
ತಿರುಗುವಷ್ಟರಲ್ಲಿ, ಆ ಭಂಡ ಆಗಲೇ ಕೈ ತೋರಿ ನಿಂತಿದ್ದ. ದೃಷ್ಟಿ ಅತ್ತ ಹರಿಸಿದೆ. ಕಾಲ ಕೆಳಗಿದ್ದ ನೆಲವೇ ಕುಸಿದಂತಾಯ್ತು!
ತೆನೆಹೊತ್ತ ಭತ್ತದ ಪೈರಿನಂತೆ, ಎದೇಯೆತ್ತರಕ್ಕೆ ಹುಲುಸಾಗಿ, ಹಸಿರಾಗಿ ಬೆಳೆದಿತ್ತು "ಹುಲ್ಲು". ಆಗೊಮ್ಮೆ,ಈಗೊಮ್ಮೆ ಪ್ರಕೃತಿ ಆರಾಧಕನಾಗುತಿದ್ದ ನನ್ನ ಬಿಕನಾಸಿ ಗೆಳೆಯನಿಗೆ ಕಂಡಿದ್ದು "ಹುಲ್ಲು". ಪಾಪ, ಅವನ ತಪ್ಪಿಲ್ಲ, ಬೆಂಗಳೂರಲ್ಲಿ ಅವನು ಅಷ್ಟು ಎತ್ತರಕ್ಕೆ ಬೆಳೆದ ಹುಲ್ಲು ಎಲ್ಲಿ ತಾನೇ ನೋಡಿರಲು ಸಾಧ್ಯ! ಕಂಡಾಗ ಬೆಚ್ಚಿಬಿದ್ದ.
ತನ್ನ ಭಯಂಕರ ಕನ್ನಡ ಪ್ರಯೋಗದಿಂದ ಅಲ್ಲೊಂದು ಗೂಬೆಯನ್ನೇ ಸೃಷ್ಟಿಸಿದ. ಅವನು ಕಂಡ "ಉಲ್ಲು" ವನ್ನು ಹುಡುಕುವ ಭರಾಟೆಯಲ್ಲಿ ನಾನೇ "ಉಲ್ಲು"ವಾದೆ!. ಅವನು ಸುಳ್ಳಾಡಲಿಲ್ಲ!, ಇತ್ತಲ್ಲ ಅಲ್ಲಿ ಒಂದು ದೊಡ್ಡ ಉಲ್ಲು, ಇಂಜಿನಿಯರಿಂಗ್ ಓದುತಿದ್ದ ಉಲ್ಲು.
ನಕ್ಕೇ, ಅವನಿಗರ್ಥವಾಗಲಿಲ್ಲ, ಮುನ್ನೆಡೆದ. ನೋವಾಯ್ತು, ಗೂಬೆಯದದಕ್ಕಲ್ಲ, ನನ್ನ ಪ್ರೀತಿಯ ಕನ್ನಡದ ಸ್ಥಿತಿ ನೋಡಿ. ಅವನಿಗೆ ತಾನು ತಪ್ಪು ಮಾತಾಡಿದೆ ಎಂಬ ಪರಿಜ್ಞಾನವೂ ಇಲ್ಲ! ಇವರು ನಮ್ಮ ಮುಂದಿನ ಪೀಳಿಗೆಗೆ ದಾರಿ ದೀಪಕರಾಗುತ್ತಾರೆ, ತಾವು ಕಲಿತ ಕನ್ನಡವನ್ನೇ ಅವರಿಗೂ ಕಲಿಸುತ್ತಾರೆ. ಮುಂಬರುವ ಪೀಳಿಗೆಗೆ, "ಅಮ್ಮ" ಇರುವುದಿಲ್ಲ ಬದಲಾಗಿ "ಹಮ್ಮ" ಇರುತ್ತಾಳೆ! ಅಪ್ಪನನ್ನ "ಹಪ್ಪ" ತಿಂದು ಮುಗಿಸಿರುತ್ತದೆ. ಆಕಳು "ಹಾಕಳಾಗುತ್ತದೆ", ಹಾಲು "ಆಲು" ಆಗುತ್ತದೆ!
ಮುನೊಂದು ದಿನ ಗಂಡನಿಗೆ ಹೆಂಡತಿ "ರೀ, ಆಲು ತಂಗೊಂಡ್ ಬನ್ರೀ " ಅಂದರೆ, ಹಾಲು ತರಬೇಕೋ ಆಲೂಗಡ್ಡೆ ತರಬೇಕೋ ಎಂದು ಗಂಡ ತಲೆ ಕೆರೆದುಕೊಳ್ಳ ಬೇಕಾಗಬಹುದು.
ಭಾಷೆಯ ಸೊಗಡು, ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಬದಲಾಗುವುದು ಸಹಜ, ಭಾಷೆ ಬೆಳೆಯ ಬೇಕು ಹಾಗಾಗಿ ಪರ ಭಾಷೆಗಳಿಂದ ಶಬ್ಧ ಆಮದು ಮಾಡಿಕೊಳ್ಳಬೇಕಾದುದು ಅನಿವಾರ್ಯ, ಭಾಷೆ ಉಳಿಯಲು, ಬೆಳೆಯಲು ಹೊಸಪದಗಳ ಉತ್ಪತ್ತಿ ಆಗಬೇಕು ಒಪ್ಪಿಕೊಳ್ಳುತ್ತೇನೆ. ಸುಮ್ಮನೆ ತರಲೆ ತೆಗೆಯುವ ಮಡಿವಂತಿಕೆಯ ಕನ್ನಡಿಗನಲ್ಲ ನಾನು, ಆದರೆ ಒಮ್ಮೆ ಯೋಚಿಸಿ, ಭಾಷಾ ಸೊಗಡಿನ ಹೆಸರಲ್ಲಿ, ಪದವನ್ನು ತಪ್ಪಾಗಿ ಉಚ್ಛರಿಸಿದರೆ, ಬಳಸಿದರೆ, ಭಾಷಾ ಸೌಂದರ್ಯವನ್ನೇ ಹಾಳು ಮಾಡಿದರೆ, ಭಾಷೆ ಉಳಿಯುವುದಾದರೂ ಎಂತು ?
ಭಾಷೆಯನ್ನು ಪರಭಾಷಿಕರ ಮೇಲೆ ಹೊರಿಸಿ, ಅವರಿಗೆ ಕನ್ನಡ ಕಲಿಸುವ ಮುನ್ನ, ನಮ್ಮ ಕನ್ನಡವನ್ನು ನಾವು ಸರಿಯಾಗಿ ಬಳಸಲು ಕಲಿಯೋಣ. ಭಾಷೆಯನ್ನು ಉಳಿಸುವುದು, ಕಾಪಾಡಿಕೊಳ್ಳುವುದು ಬಹಳ ದೊಡ್ಡ ವಿಷಯ, ನನ್ನ ಮಿತಿ ಮೀರಿದ್ದು, ಆದರೆ ಸರಿಯಾಗಿ ಬಳಸಿ, ಬೆಳೆಸುವುದು? ನಮ್ಮ ಕೈಯಲ್ಲೇ ಇದೆ, ಅಲ್ಲವೇ?

No comments:
Post a Comment